ಪರಿಚಯ

ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಧ್ಯೇಯದೊಂದಿಗೆ 1947 ರಲ್ಲಿ ಸ್ಥಾಪಿಸಲ್ಪಟ್ಟ ಕೆನರಾ ಕಾಲೇಜು ಸೊಸೈಟಿಯು ಕಾಲೇಜು ಶಿಕ್ಷಣದಲ್ಲಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಪ್ರಶಿಕ್ಷಣ ಮಹಾವಿದ್ಯಾಲಯವನ್ನು ಆರಂಭಿಸಿ ಕೀರ್ತಿ ಹಾಗೂ ಹೆಸರನ್ನು ಗಳಿಸಿ ತದನಂತರ ಜಿಲ್ಲೆಯಲ್ಲಿ ಅವಶ್ಯವಿರುವ ತಾಂತ್ರಿಕ ಶಿಕ್ಷಣದ ಅವಶ್ಯಕತೆಯನ್ನು ಮನಗಂಡು 1985 ರಲ್ಲಿ ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭಿಸಿತು. ಇದು ಇದರ ಕೀರ್ತಿಯ ಕಿರೀಟಕ್ಕೆ ಮತ್ತೊಂದು ಮುತ್ತನ್ನು ಅಳವಡಿಸಿದಂತಾಯಿತು ಈ ಸಂಸ್ಥೆಯು ಸುಂದರ ಪರಿಸರ ಮತ್ತು ಆವರಣವನ್ನು ಹೊಂದಿರುವುದು ಶಿಕ್ಷಣಕ್ಕೆ ಪ್ರಾಶಸ್ತ್ಯ ಸ್ಥಳವಾಗಿದೆ.

Shree Shreemad Vidyadhiraj Teerth Shreepad Vader Swamiji

ಶ್ರೀಶ್ರೀ ಶ್ರೀ ವಿದ್ಯಾಧಿರಾಜತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಶ್ರೀ ಗೋಕರ್ಣ ಪರ್ತಗಾಳಿ ಮಠ

1985 ರಲ್ಲಿ ಶ್ರೀ ಶ್ರೀ ವಿದ್ಯಾಧಿರಾಜತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಶ್ರೀ ಗೋಕರ್ಣ ಪರ್ತಗಾಳಿ ಮಠ ಇವರ ಆಶೀರ್ವಾದದೊಂದಿಗೆ ಹಾಗೂ ಘನ ಕರ್ನಾಟಕ ಸರಕಾರದ ಅನುಮತಿಯೊಂದಿಗೆ ಪ್ರಾರಂಭವಾದ ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್ ಪ್ರಾರಂಭದಲ್ಲಿ ಮೆಕ್ಯಾನಿಕಲ್ ಇಂಜನೀಯರಿಂಗ್, ಸಿವಿಲ್ ಇಂಜನೀಯರಿಂಗ್, ಮತ್ತು ಇಲೆಕ್ಟ್ರಾನಿಕ್ಸ ಮತ್ತು ಟೆಲಿಕಮ್ಯುನಿಕೇಶನ್ ಇಂಜನೀಯರಿಂಗ್ ಮೂರು ಕೋರ್ಸುಗಳನ್ನು ಪ್ರಾರಂಭಿಸಿತು.. ಕಾಲಕಾಲಕ್ಕೆ ಅವಶ್ಯವಿರುವ ಪಾಠೋಪಕರಣ ಮತ್ತು ಪೀಠೋಪಕರಣ ಯಂತ್ರೋಪಕರಣಗಳನ್ನು ಹಾಗೂ ಹೊಸ ಕಟ್ಟಡಗಳನ್ನು ನಿರ್ಮಿಸಿ ಅವಶ್ಯಕತೆಗಳನ್ನು ಪೂರೈಸಿರುವ ಆಡಳಿತ ಮಂಡಳಿಯು 1987 ರಲ್ಲಿ ಕಂಪ್ಯೂಟರ್ ಸಾಯಿನ್ಸ ಮತ್ತು ಇಂಜನೀಯರಿಂಗ್ ಹಾಗೂ 1992 ರಲ್ಲಿ ಅಟೊಮೋಬೈಲ್ ಇಂಜನೀಯರಿಂಗ್ ಕೋರ್ಸುಗಳನ್ನು ಪ್ರಾರಂಭಿಸಿತು.ಪ್ರಸ್ತುತ ಸಂಸ್ಥೆಯಲ್ಲಿಯ ಇಂಟೆಕ್ ಮಿತಿ ಈ ಕೆಳಗಿನಂತಿದೆ.

ಅ.ನಂ. ಕೋರ್ಸು ವಿವರ ಇಂಟೇಕ್ ಮಿತಿ
1 ಮೆಕ್ಯಾನಿಕಲ್ ಇಂಜನೀಯರಿಂಗ್ (ಜನರಲ್) 60
2 ಸಿವಿಲ್ ಇಂಜನೀಯರಿಂಗ್ 45
3 ಇಲೆಕ್ಟ್ರಾನಿಕ್ಸ & ಕಮ್ಯುನಿಕೇಶನ್ ಇಂಜನೀಯರಿಂಗ್ 60
4 ಕಂಪ್ಯೂಟರ್ ಸಾಯಿನ್ಸ & ಇಂಜನೀಯರಿಂಗ್ 60
5 ಅಟೊಮೋಬೈಲ್ ಇಂಜನೀಯರಿಂಗ್ 30
ಸಂಸ್ಥೆಯು ಏ.ಐ.ಸಿ.ಟಿ.ಇ ನವದೆಹಲಿಯಿಂದ ಮಾನ್ಯತೆ ಪಡೆದಿ್ದ್ದು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಮತ್ತು ತಾಂತ್ರಿಕ ಪರೀಕ್ಷಾ ಮಂಡಳಿಯ ಸಂಯೋಜನೆ ಪಡೆದಿರುತ್ತದೆ. ಮಾನ್ಯ ಕರ್ನಾಟಕ ಘನ ಸರಕಾರವು ಸಂಸ್ಥೆಯ ಮೆಕ್ಯಾನಿಕಲ್, ಸಿವಿಲ್ ಮತ್ತು ಇಲೆಕ್ಟ್ರಾನಿಕ್ಸ ಕೋರ್ಸುಗಳಿಕೆ ಜೂನ್ 2009 ರಿಂದ ಸಿಬ್ಬಂದಿಗಳಿಗೆ ವೇತನ ಬಿಡುಗಡೆ ಮಾಡುತ್ತಿದೆ.ಸಂಸ್ಥೆಯ 61 ಸಿಬ್ಬಂದಿಗಳು ಸರಕಾರದ ವೇತನ ಪಡೆಯುತ್ತಿದ್ದಾರೆ.