ಎನ್ .ಸಿ.ಸಿ.

 ನಮ್ಮ ಸಂಸ್ಥೆಯಲ್ಲಿ ಶಿಸ್ತು ಮತ್ತು ಸಮಾನತೆ ಧ್ಯೇಯದೊಂದಿಗೆ 100 ಕೆಡೆಟಗಳ ಮಿತಿಯೊಂದಿಗೆ 2000ನೇ ಇಸ್ವಿಯಲ್ಲಿ 4/29 ಎ ಕೊಯ್ ಎನ್.ಸಿ.ಸಿ.  ಘಟಕವನ್ನು ಪ್ರಾರಂಭಿಸಲಾಯಿತು.

ಎನ್.ಸಿ.ಸಿ.ಯ ಧ್ಯೇಯ ಮತ್ತು ಗುರಿಗಳು

·         ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ, ನಾಯಕತ್ವ, ಸಮಾನತೆ, ಕ್ರೀಡಾ ಮನೋಭಾವ, ಸಾಧನೆಮಾರ್ಗ, ಸ್ವಯಂ ಕ್ರಿಯಾ ಶೀಲತೆ ಬೆಳೆಸುವುದು.

·         ರಾಷ್ಟ್ರೀಯ ಸೇವೆಗಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಯುವ ಸಂಘಟನೆ, ತರಬೇತಿ ಹಾಗೂ ನಾಯಕತ್ವ ಬೆಳೆಸಿ ಸಮಾಜಸೇವೆಯಲ್ಲಿ ಭಾಗಿಯಾಗಲು ಪ್ರೇರೆಪಿಸುವುದು.

·         ದೇಶದ ರಕ್ಷಣೆಯಲ್ಲಿ ಭೂ ಸೈನ್ಯದಲ್ಲಿ ಸೇರುವಲ್ಲಿ ಯುವಜನತೆಯನ್ನು ಪ್ರೇರೆಪಿಸುವುದು.

ಪ್ರಸ್ತುತ ನಮ್ಮ ಎನ್.ಸಿ.ಸಿ. ಘಟಕವು 108 ಕೆಡೆಟಗಳನ್ನು ಹೊಂದಿ (73 ಪುರುಷರು ಹಾಗೂ 35 ಮಹಿಳಾ ಕೆಡೆಟ‍ಗಳು ) 29 ಕರ್ನಾಟಕ ಬಟಾಲಿಯನ್, ಕಾರವಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಾಂತೀಯ ಮತ್ತು ವಿಭಾಗೀಯ ಎನ್.ಸಿ.ಸಿ. ಕಾರ್ಯಾಲಯಗಳು ಪ್ರತಿ ವರ್ಷ ರಾಷ್ಟ್ರೀಯ ಹಾಗೂ ವಿಭಾಗೀಯ ಶಿಬಿರಗಳನ್ನು, ಥಲ ಸೈನಿಕ್ ಕ್ಯಾಂಪ್,  ಆಯೋಜಿಸುತ್ತದೆ. ನಮ್ಮ ಘಟಕದ ಕೆಡೆಟ್‍ಗಳು ಎಲ್ಲ ಶಿಬಿರಗಳಲ್ಲೂ ಭಾಗವಹಿಸುತ್ತಾ ಬಂದಿರುತ್ತಾರೆ.

ತರಬೇತು ಪಡೆದ ಎನ್.ಸಿ.ಸಿ ಕೆಡೆಟ್ ಗಳು ಈ ಕೆಳಗಿನ ವಿಶೇಷ ಸೌಲಭ್ಯಕ್ಕೆ ಹಾಗೂ ವಿನಾಯ್ತಿಗೆ ಅರ್ಹರಾಗಿರುತ್ತಾರೆ.

1) ಎನ್.ಸಿ.ಸಿ. “ಸಿ”  ಪ್ರಮಾಣಪತ್ರ ಪಡೆದಂತ ವಿದ್ಯಾರ್ಥಿಗಳಿಗಾಗಿ ಭಾರತೀಯ ಭೂದಳ, ವಾಯುದಳ ಹಾಗೂ ನೌಕಾದಳದಲ್ಲಿ ಉದ್ಯೋಗವನ್ನು ಮೀಸಲಾಗಿಟ್ಟು ನೇಮಕಾತಿ ಮಾಡಲಾಗುತ್ತದೆ.

2) ಪ್ರತಿಶತ 5 ರಿಂದ 10 ವಿಶೇಷ ಹೆಚ್ಚುವರಿ ಅಂಕಗಳನ್ನು ವಾಯುದಳ, ಭೂದಳ, ನೌಕಾದಳ ನೇಮಕಾತಿ ಸಂದರ್ಭ ಪರಿಗಣಿಸಲಾಗುತ್ತದೆ.

3) ಸಿ.ಆರ್.ಪಿ.ಎಫ್ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

4) ರಾಜ್ಯ ಸರಕಾರಿ ಹುದ್ದೆಗಳಲ್ಲಿ ಮತ್ತು ಖಾಸಗಿ ವಲಯದಲ್ಲಿ ಹೆಚ್ಚಿನ ಪ್ರಾಶಸ್ತಕ್ಕೆ ಅರ್ಹರಿರುತ್ತಾರೆ.

5) ಮಹಿಳಾ ಎನ್.ಸಿ.ಸಿ.ಕೆಡೆಟಗಳಾಗಿದ್ದಲ್ಲಿ ಎನ್.ಸಿ.ಸಿ. ಘಟಕದಲ್ಲಿಯೇ ಬೋಧಕರಾಗಿ ಸೇವೆ ಸಲ್ಲಿಸುವ   ಅವಕಾಶವಿದೆ.

ಆರ್ಥಿಕ ಸಹಾಯಧನ ಮತ್ತು ವಿದ್ಯಾರ್ಥಿವೇತನ ಸೌಲಭ್ಯ :

1)    ಯಾವುದೇ ಎನ್.ಸಿ.ಸಿ ಕೆಡೆಟ್ ಅಪಘಾತಕ್ಕೊಳಗಾದಲ್ಲಿ ಯಾ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದಲ್ಲಿ  ರೂ 1,75,000/- ರಿಂದ ರೂ 4,00,000/- ದವರೆಗೆ ಸಹಾಯಧನ ನೀಡಲಾಗುತ್ತದೆ.

2)    ಶೈಕ್ಷಣಿಕವಾಗಿ ಪ್ರತಿಭಾನ್ವಿತ ಎನ್.ಸಿ.ಸಿ. ಕೆಡೆಟ್ ವಿದ್ಯಾರ್ಥಿಗಳಿಗೆ ರೂ. 6000/- ವಿದ್ಯಾರ್ಥಿವೇತನ ನೀಡಲಾಗುವುದು.

3)    ಉತ್ತಮ ಕೆಡೆಟ ಅವಾರ್ಡ ನೀಡಿ ಗೌರವಿಸಲಾಗುವುದು.

4)    ಸಂಶೋಧನೆ ಮತ್ತು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ರಾಜ್ಯ ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳು  :-

1)“ಬಿ” ಪ್ರಮಾಣಪತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೆಡೆಟ್‍ಗಳಿಗೆ ಪೋಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶ ಕಲ್ಪಸಿಕೊಡಲಾಗುವುದು.

2) ವೈದ್ಯಕೀಯ ಹಾಗೂ ಆರ್ಯುವೇದ ವೈದ್ಯಕೀಯ ಶಿಕ್ಷಣದಲ್ಲಿ, ಉನ್ನತ ಶಿಕ್ಷಣ ಮತ್ತು ಸ್ನಾತಕೋತ್ತರ  ಶಿಕ್ಷಣದಲ್ಲಿ ಪ್ರವೇಶಕ್ಕೆ  ಸೀಟಗಳನ್ನು ಕಾಯ್ದಿರಿಸಲಾಗುತ್ತದೆ.

ನಮ್ಮ ಎನ್.ಸಿ.ಸಿ ಘಟಕವು ಎನ್.ಸಿ.ಸಿ. ಎರಡನೇಯ ಮತ್ತು ಮೂರನೇಯ ವರ್ಷದ ವಿದ್ಯಾರ್ಥಿಗಳಿಗಾಗಿ  ಪ್ರತಿ ವರ್ಷ “ಬಿ” ಮತ್ತು “ಸಿ” ಪ್ರಮಾಣ ಪತ್ರ ಪರೀಕ್ಷೆಯನ್ನು ನಡೆಸುತ್ತದೆ.

ಸಂಸ್ಥೆಯ ಎನ್.ಸಿ.ಸಿ. ಘಟಕವು ಆಗಸ್ಟ ಪ್ರಾರಂಭದಿಂದ ಜನವರಿ ಅಂತ್ಯದವರೆಗೆ ಎನ್.ಸಿ.ಸಿ. ಪರೇಡ ನಡೆಸಿ ವಿಶೇಷ ತರಬೇತಿ ನೀಡುತ್ತದೆ. ಹಾಗೂ ಸಮಾಜಸೇವೆಗೆ ಪೂರಕವಾಗಿ “ಹಸಿರು ಉಸಿರು”, “ಬೇಟಿ ಬಚಾವೋ ಬೇಟಿ ಪಡಾವೋ”, “ಸ್ವಚ್ಛತಾ ಅಭಿಯಾನ”, “ರಕ್ತದಾನ ಶಿಬಿರ”, ಸ್ವಚ್ಛತಾ ಪಕ್ವಾಡ”. ಸಾಮಾಜಿಕ ಅರಿವು, ಜಾಥಾಗಳನ್ನು ಮಾಡುವ ಮೂಲಕ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತದೆ. ನಮ್ಮ ಸಂಸ್ಥೆಯ ಎನ್.ಸಿ.ಸಿ. ಕೆಡೆಟಗಳು ಪ್ರತಿ ವರ್ಷ “ಬಿ” ಮತ್ತು “ಸಿ” ಅರ್ಹತಾ ಪರೀಕ್ಷೆಯಲ್ಲಿ ಉತ್ತಮ ಪರಿಣಾಮ ತರುತ್ತಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಶಿಬಿರಗಳಲ್ಲಿ, ದೆಹಲಿಯಲ್ಲಿ ನಡೆದ  ಗಣರಾಜ್ಯದ ಪರೇಡಗಳಲ್ಲಿ ಆರ್.ಡಿ.ಪರೇಡಗಳಲ್ಲಿ ಭಾಗವಹಿಸುತ್ತಾ ಉತ್ತಮ ಪ್ರತಿಭೆಯನ್ನು ತೋರುತ್ತಾ  ಬಂದಿರುತ್ತಾರೆ.