ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಧ್ಯೇಯದೊಂದಿಗೆ 1947 ರಲ್ಲಿ
ಸ್ಥಾಪಿಸಲ್ಪಟ್ಟ ಕೆನರಾ ಕಾಲೇಜು ಸೊಸೈಟಿಯು ಕಾಲೇಜು ಶಿಕ್ಷಣದಲ್ಲಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ,
ವಾಣಿಜ್ಯ ಮಹಾವಿದ್ಯಾಲಯ ಹಾಗೂ ಪ್ರಶಿಕ್ಷಣ ಮಹಾವಿದ್ಯಾಲಯವನ್ನು ಆರಂಭಿಸಿ ಕೀರ್ತಿ ಹಾಗೂ ಹೆಸರನ್ನು ಗಳಿಸಿ
ತದನಂತರ ಜಿಲ್ಲೆಯಲ್ಲಿ ಅವಶ್ಯವಿರುವ ತಾಂತ್ರಿಕ ಶಿಕ್ಷಣದ ಅವಶ್ಯಕತೆಯನ್ನು ಮನಗಂಡು 1985 ರಲ್ಲಿ ಶ್ರೀ
ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭಿಸಿತು. ಇದು ಇದರ ಕೀರ್ತಿಯ ಕಿರೀಟಕ್ಕೆ ಮತ್ತೊಂದು
ಮುತ್ತನ್ನು ಅಳವಡಿಸಿದಂತಾಯಿತು ಈ ಸಂಸ್ಥೆಯು ಸುಂದರ ಪರಿಸರ ಮತ್ತು ಆವರಣವನ್ನು ಹೊಂದಿರುವುದು ಶಿಕ್ಷಣಕ್ಕೆ
ಪ್ರಾಶಸ್ತ್ಯ ಸ್ಥಳವಾಗಿದೆ.
Read More...
ದೂರದೃಷ್ಟಿ(Vision)
ನಿರ್ದಿಷ್ಟ ಪಡಿಸಿದ ಗುರಿ (Mission)
-
ಪ್ರಸ್ತುತ ವಿದ್ಯಾರ್ಥಿಗಳಿಗೆ ಅವಶ‍್ಯವಿರುವ ತಾಂತ್ರಿಕ ಕೌಶಲ್ಯಗಳನ್ನು ಒದಗಿಸಿ ಸಮಾಜದ ಅವಶ‍್ಯಕತೆಗೆ
ತಕ್ಕಂತೆ ನೈತಿಕ ಮೌಲ್ಯಯುತ ಜವಾಬ್ದಾರಿಯುತ ವೃತ್ತಿ ನಿರತರನ್ನಾಗಿ ರೂಪಿಸುವುದು.
-
ವಿದ್ಯಾರ್ಥಿಗಳಿಗೆ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಸೂಕ್ತ ಯೋಜನೆಯ ಮೂಲಕ ಉತ್ತಮ ಗುಣಮಟ್ಟವನ್ನು
ಕಾಯ್ದುಕೊಳ್ಳಲು ಜಾಗೃತೆ ಮೂಡಿಸುವುದು.
-
ವಿದ್ಯಾರ್ಥಿಗಳಿಗೆ ರಾಷ್ಟ್ರೀಯತೆ ಬಗ್ಗೆ ಗೌರವ ಬೆಳೆಸಿಕೊಳ್ಳಲು ಮತ್ತು ಕರ್ತವ್ಯವನ್ನು ನಿಭಾಯಿಸಲು
ಅರಿವು ಮೂಡಿಸಿ ಉತ್ತಮ ನಾಗರಿಕರಾಗಲು ಪ್ರೇರೇಪಿಸುವುದು.
ಕೋರ್ಸುಗಳ ವಿವರ:-
ಅ.ನಂ. |
ಕೋರ್ಸು ವಿವರ |
ಇಂಟೇಕ್ ಮಿತಿ |
1 |
ಮೆಕ್ಯಾನಿಕಲ್ ಇಂಜನೀಯರಿಂಗ್ (ಜನರಲ್) |
54 |
2 |
ಸಿವಿಲ್ ಇಂಜನೀಯರಿಂಗ್ |
41 |
3 |
ಇಲೆಕ್ಟ್ರಾನಿಕ್ಸ & ಕಮ್ಯುನಿಕೇಶನ್ ಇಂಜನೀಯರಿಂಗ್ |
54 |
4 |
ಕಂಪ್ಯೂಟರ್ ಸಾಯಿನ್ಸ & ಇಂಜನೀಯರಿಂಗ್ |
54 |
5 |
ಅಟೊಮೋಬೈಲ್ ಇಂಜನೀಯರಿಂಗ್ |
27 |
|